ರಾಘವೇಂದ್ರ ರಾಜ್ ಕುಮಾರ್ ಸುಪುತ್ರ``ಯುವ``ರಾಜ್ ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ
Posted date: 22 Fri, Mar 2024 07:36:27 PM
ದೊಡ್ಮನೆಯ ಕುಟುಂಬದ ಮತ್ತೊಂದು ಕುಡಿ “ ಯುವ ರಾಜ್ ಕುಮಾರ್” “ ಯುವ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಈ ಮೂಲಕ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದು ವಿಜಯ್ ಕಿರಂಗದೂರು ನಿರ್ಮಾಣ ಮಾಡಿದ್ದಾರೆ. ಇದೇ ತಿಂಗಳ 29 ರಂದು 350ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಕನ್ನಡದಲ್ಲಿ ಬಿಡುಗಡೆಗೆ ಸಜ್ಜಾಗಿದೆ. 
 
"ಯುವ" ನಾಗಿ ರಾಘವೇಂದ್ರ ರಾಜ್ ಕುಮಾರ್  ಸುಪುತ್ರ  ಚಿತ್ರರಂದಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ.
“ಯುವ” ಬಿಡುಡಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರದ ಬಗ್ಗೆ ಭರವಸೆ ಹೆಚ್ಚಿದೆ, ನಾವು ಸರಿಯಾಗಿ ಮಾಡಿದ್ದೇವೆ. ಆದರೂ ಜನ ಯಾವ ರೀತಿ ತೆಗೆದುಕೊಳ್ತಾರೆ ಅನ್ನುವ ಭಯ ಇದೆ…..” ಅಭಿಮಾನಿಗಳು ನನ್ನ ಮೂಲಕ ಚಿಕ್ಕಪ್ಪನನ್ನು ಕಾಣಲು ಬಯಸಿದ್ಧಾರೆ. ಜೊತೆಗೆ ದೊಡ್ಡಪ್ಪನಿಂದ ಸಾಕಷ್ಟು ಕಲಿತಿದ್ದೇನೆ  ಎಂದರು  ನಟ ಯುವ ರಾಜ್‍ಕುಮಾರ್. ಯುವ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಮೂಡಿ ಬಂದಿರುವ ಪರಿಗೆ ಖುಷಿ ವ್ಯಕ್ತಪಡಿಸುತ್ತಲೇ ಜನರು ಯಾವ ರೀತಿ ತೆಗೆದುಕೊಳ್ತಾರೋ ಎನ್ನವು ಭಯ ಅಳುಕಿದೆ ಎಂದರು.

ಇಂಡಸ್ಟ್ರಿಗೆ ಬರುವ ಮುನ್ನ ಡಿಗ್ರಿ ಪಡಿಬೇಕು ಎನ್ನುವ ಆಸೆ ಇತ್ತು. ಹೀಗಾಗಿ ಆರ್ಕಿಟೆಕ್ ಮುಗಿಸಿದೆ. ಆನಂತರ ಮುಂಬೈ ಮತ್ತು ಬೆಂಗಳೂರಿನಲ್ಲಿ ತರಬೇತಿ ಪಡೆದೆ. ನನ್ನ ಮೇಲೆ ನನಗೆ ಭರವಸೆ ಬಂದ ಮೇಲೆ ಸಿನಿಮಾಕ್ಕೆ ಬರಲು ಒಪ್ಪಿಕೊಂಡೆ. ‘ಯುವ ರತ್ನ” ಚಿತ್ರದ ಚಿತ್ರೀಕರಣದ ಸಮಯದಲ್ಲಿ ಯಾವುದಾದರೂ ಕತೆ ಇದ್ದರೆ ಹೇಳಿ ಎಂದು ನಿರ್ದೇಶಕರನ್ನು ಕೇಳಿದ್ದೆ, ಒಳ್ಳೆಯ ಕಥೆ ಸಿಕ್ಕರೆ ಹೇಳುತ್ತೇನೆ ಎಂದಿದ್ದರು.ಅದಕ್ಕೆ ತಕ್ಕಂತೆ ಕಥೆ ಸಿಕ್ಕಿ ಚಿತ್ರೀಕರಣ ಆರಂಭವಾಗಿದೆ. ಬಿಡುಗಡೆಗೂ ಸಜ್ಜಾಗಿದೆ.

ಚಿತ್ರದಲ್ಲಿ ತಂದೆ ಮಗನ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅದು ಇಷ್ಟವಾಯಿತು. ಚಿತ್ರ ನೋಡಿದ ಮಂದಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸವಿದೆ. ಚಿತ್ರದ ಕೆಲವೊಂದು ಭಾಗ ಸನ್ನಿವೇಶಗಳನ್ನು ಅಪ್ಪ, ಅಮ್ಮ, ದೊಡ್ಡಪ್ಪ, ಅಶ್ವಿನಿ ಆಂಟಿ ಸೇರಿದಂತೆ ಕುಟುಂಬದ ಹಲವು ಮಂದಿ ನೋಡಿ ಖುಷಿಪಟ್ಟಿದ್ದಾರೆ. ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.  ಅಣ್ಣ ವಿನಯ್ ಅವರಿಂದ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇನೆ.ಆತ ಚಿತ್ರರಂಗದಲ್ಲಿ ಮಾಡಿದ ತಪ್ಪುಗಳು ಸರಿಪಡಿಸಿಕೊಂಡ ಬಗೆ ತಿಳಿದು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೇನೆ. ‘ಯುವ” ಸಂಪೂರ್ಣ ಮನರಂಜನೆಯ ಅಂಶಗಳು ಚಿತ್ರದಲ್ಲಿವೆ ಎಲ್ಲರಿಗೂ ಇಷ್ಟವಾಗಲಿದೆ.ಹಿರಿಯ ಕಲಾವಿದರಿಂದ ಸಾಕಷ್ಟು ಕಲಿತಿದ್ದೇನೆ ಎಂದರು.

ನಿರ್ದೇಶಕ ಸಂತೋಷ್ ಆನಂದ್ ರಾಮ್. ಮಾತನಾಡಿ “ಯುವ” ದುಡ್ಡಿಗಾಗಿ ಮಾಡಿದ ಸಿನಿಮಾ ಅಲ್ಲ, ಪ್ರೀತಿಗಾಗಿ ಮತ್ತು ಬದ್ದತೆಗಾಗಿ ಮಾಡಿದ ಸಿನಿಮಾ, ಗುರು (ಯುವ) ಕೂಡ  ತರಬೇತಿ ಪಡೆದು ಬಂದಿದ್ದರಿಂದ ನನಗೆ ಎಲ್ಲಿಯೂ ಕಷ್ಟ ಆಗಲಿಲ್ಲ. ಜೊತೆಗೆ ವರ್ಕ್‍ಶಾಪ್ ಮಾಡಲಾಗಿತ್ತು. ಇದರಿಂದ ನಟನೆ ತೆಗೆಸುವುದು ಸುಲಭವಾಯಿತು ಎಂದರು .

ಚಿತ್ರದ ಮೊದಲರ್ದ ನಾಯಕ ಸುತ್ತಾ ಕಥೆ ಸಾಗಲಿದೆ. ಸೆಕೆಂಡ್ ಆಫ್‍ನಲ್ಲಿ ಗುರುನ ಬ್ಲೆಂಡ್ ಮಾಡಿ ಸನ್ನಿವೇಶಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ಫೈಟು, ಡ್ಯಾನ್ಸ್ ಸೂಪರ್ ಆಗಿ ಮಾಡಿದ್ದಾರೆ. ಅಭಿನಯ ಕೂಡ ಆಶ್ಚರ್ಯ ತರಿಸಿದೆ. ಮೊದಲ ಸಿನಿಮಾದಲ್ಲಿ ಮೆಚ್ಯೂರ್ ಆಗಿ ಕಾಣೋದು ಅಪರೂಪ. ಪ್ರಭುದ್ದತೆಯಿಂದ ನಟಿಸಿದ್ಧಾರೆ.

ಅಪ್ಪು ಸಾರ್ ನಂತರ ಗುರು ಸಿನಿಮಾರಂಗಕ್ಕೆ ಬರಬೇಕು ಎಂದು ಕಾಯುತ್ತಿದ್ದರು. ಅದಕ್ಕೆ ಪೂರಕವಾಗಿ ಯುವ ಚಿತ್ರ ಬರುತ್ತಿದೆ. ನಟನೆಯಲ್ಲಿ ಪ್ರಬುದ್ದತೆ ಕಾಣುತ್ತಿದೆ. ಚಿತ್ರದಲ್ಲಿ ತಂದೆ ಮಗನ ಸಂಘರ್ಷವಿದೆ. ಕಾಲೇಜು ಮುಗಿದ ನಂತರ ಬದುಕಿನ ಹೋರಾಟದ ಕಥನವೂ ಇದೆ. ಚಿತ್ರದಲ್ಲಿ ಮೊದಲರ್ದ ಕಾಲೇಜು ಗ್ಯಾಂಗ್ ವಾರ್ ದ್ವೀಯಾರ್ದದಲ್ಲಿ ಡೆಲಿವರಿ ಬಾಯ್ ಆಗಿ ಯುವ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರು ಇಷ್ಟಪಟ್ಟರೆ ಯುವ ಎರಡನೇ ಭಾಗ ಬರಲೂ ಬಹುದು ಎಂದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed